'ಟೆಕ್ ಬುಕ್!' ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

Tuesday, May 31, 2016

ಶ್ರೀನಿಧಿ ಪುಸ್ತಕದ ಬಗ್ಗೆ ಇ-ನಿಧಿ ಬರೆಯುತ್ತಾರೆ...

ಟೆಕ್ ಬುಕ್ ಟಿ ಜಿ ಶ್ರೀನಿಧಿಯವರ ಹೊಸ ಪುಸ್ತಕ. ಇತ್ತೀಚಿಗೆ ಪ್ರಚಾರಕ್ಕೆ ಬಂದಿರುವ ವಿವಿಧ ತಂತ್ರಜ್ಞಾನ ಸಂಬಂಧಿ ವಿಷಯಗಳನ್ನು ಇದರಲ್ಲಿ ಸುಲಭವಾಗಿ ವಿವರಿಸಲಾಗಿದೆ . 3D ಪ್ರಿಂಟಿಂಗ್ , ಬಿಗ್ ಡಾಟಾ, ಮಿಥ್ಯಾ ವಾಸ್ತವ, ಇ-ಕಸ, ಕ್ರಿಕೆಟ್ ನಲ್ಲಿ ತಂತ್ರಜ್ಞಾನ, ಮಾನವಯಂತ್ರಗಳು, ಡ್ರೋನ್  ಹೀಗೆ ಹಲವು ವಿಷಯಗಳನ್ನು ಸರಳವಾಗಿ, ಸುಂದರವಾಗಿ ವಿವರಿಸಿ ಕೊಡಲಾಗಿದೆ. ಚಿಕ್ಕ ಮಕ್ಕಳಿಗೆ, ಮನೆಯ ಹಿರಿಯರಿಗೆ ತಾಂತ್ರಿಕ ವಿಷಯಗಳನ್ನು ಸುಲಲಿತವಾಗಿ ಅರ್ಥೈಸಲು ಈ ಪುಸ್ತಕ ಸಹಕಾರಿ.

ಮೊಬೈಲುಗಳಲ್ಲಿ ಚಿನ್ನ ಬಳಸಿರುವುದು ಗೊತ್ತಿತ್ತು, ಆದರೆ ಎಷ್ಟು ಇರತ್ತೆ ಅಂತ ಗೊತ್ತಿರಲಿಲ್ಲ. ಒಂದೆರಡು ಗ್ರಾಂ ಸಿಕ್ಕರೂ ಸಾವಿರಾರು ರು ಆಗುತ್ತೆ ಅಂದುಕೊಂಡು ಒಂದೆರಡು ಹಳೆಯ ಮೊಬೈಲುಗಳನ್ನು ತೆಗೆದಿಟ್ಟಿದ್ದೆ. ಟೆಕ್ ಬುಕ್ ಓದಿದ ಮೇಲೆ ಅವನ್ನು ಇಟ್ಟುಕೊಳ್ಳಲೂ ಆಗದೆ (ಒಂದೆರಡು ಹಳೆ ಮೊಬೈಲಿಂದ ಚಿನ್ನ ತೆಗೆಯುವುದು ಆಗುವ ಹೋಗುವ ಕೆಲಸವಲ್ಲವಂತೆ) ಎಸೆಯಲೂ ಆಗದೇ (ಇ-ಕಸ) ಕುಳಿತಿದ್ದೇನೆ :(

ಗೋ ಪ್ರೋ ಇತ್ಯಾದಿ ಕ್ಯಾಮೆರ ಹಾಗು ನಿಸ್ತಂತು ಚಾರ್ಜಿಂಗ್ ಕುರಿತಂತೆ ಸ್ವಲ್ಪ ಬರೆಯಬಹುದಿತ್ತೆಂದು ನನ್ನ ಅನಿಸಿಕೆ. ಗೊಗಲ್ ಕ್ರೋಮ್ ಕಾಸ್ಟ್ ಬಗ್ಗೆಯೂ ಸ್ವಲ್ಪ ಹೆಚ್ಚು ಬರೆಯಬಹುದಿತ್ತೇನೊ. ಬಳಸಿದ ಚಿತ್ರಗಳ ಮೂಲ ಫೋಟೋಗ್ರಾಫರ್ ಅಥವಾ ವೆಬ್ ಸೈಟ್ ಹೆಸರು ನಮೂದಿಸಬೇಕಿತ್ತು.

ಇಜ್ಞಾನ ಕುರಿತಂತೆ:  ಏಪ್ರಿಲ್ ೨೦೦೭ರಲ್ಲಿ ಪ್ರಾರಂಭವಾದ ಇಜ್ಞಾನ ಟಿ ಜಿ ಶ್ರೀನಿಧಿಯವರ ತಾಣ. ತಂತ್ರಜ್ಞಾನ ಕುರಿತಾದ ಬರಹಗಳಿಂದ ಸಾಕಷ್ಟು ಜನಪ್ರಿಯವಾಗಿದೆ. ಮಾರುಕಟ್ಟೆಗೆ ಬರುವ ಹೊಸ ಹೊಸ ಮೊಬೈಲುಗಳು, ಆಪ್, ಇತರ ಉಪಕರಣಗಳ ಬಗ್ಗೆ ತಿಳಿದುಕೊಳ್ಳಲು ಯಾವುದೇ ಆಂಗ್ಲ ಭಾಷಾ ಬ್ಲಾಗುಗಳನ್ನು ಅವಲಂಬಿಸದೆ ಕನ್ನಡದಲ್ಲೇ ತಿಳಿದುಕೊಳ್ಳಲು ಇಜ್ಞಾನ ಬಹಳ ಉಪಯೋಗಿ. ಬರೆಯ ಬಯಸುವವರಿಗೆ ಸೂಕ್ತ ಮಾರ್ಗದರ್ಶನವೂ ಇಲ್ಲಿದೆ.

ಹತ್ತನೇ ವರ್ಷಕ್ಕೆ ಕಾಲಿಟ್ಟಿರುವ ಇಜ್ಞಾನ ಇನ್ನೂ ಹತ್ತು ಹಲವು ದಶಕಗಳ ಕಾಲ ಅವಿರತವಾಗಿ ನಡೆಯಲಿ ಎಂದು ಹಾರೈಸುತ್ತೇನೆ.

- ಶ್ರೀನಿಧಿ ಹಂದೆ

ಶ್ರೀನಿಧಿಯವರ ಜಾಲತಾಣದಲ್ಲಿ ಈ ಲೇಖನ ಪ್ರಕಟವಾಗಿರುವ ಪುಟ ಇಲ್ಲಿದೆ: www.enidhi.net/2016/05/techbook-by-srinidhi-tg-ejnana-com.html

0 comments:

Post a Comment